ಅನ್ಜಾರ್
ಗುಜರಾತ್ ರಾಜ್ಯದ ಒಂದು ಪಟ್ಟಣ. ತಾಲ್ಲೂಕು ಕೇಂದ್ರ (ಉ.ಅ. 230 10' ಪೂ.ರೇ. 700 4'). ಕಚ್ಛ್ ಕೊಲ್ಲಿಯಂದ 16 ಕಿ.ಮೀ. ದೂರದಲ್ಲಿದೆ. ನೀರಿನ ಅಭಾವದಿಂದ ಒಣಪ್ರದೇಶ. ಬಾವಿಯಿಂದ ನೀರನ್ನೆತ್ತಿ ಸುತ್ತಣ ಪ್ರದೇಶದಲ್ಲಿ ಗೋದಿ, ಹತ್ತಿ ಮುಂತಾದವನ್ನು ಬೆಳೆಯುತ್ತಾರೆ. 
1952ರಲ್ಲಿ ಕಾಂಡ್ಲಾ-ದೀಸಾ ಮೀಟರ್‍ಗೇಜ್ ರೈಲು ಮಾರ್ಗವನ್ನು ಡಾ. ರಾಜೇಂದ್ರಪ್ರಸಾದರು ಉದ್ಘಾಟಿಸಿದ ಅನಂತರ ಈ ಪಟ್ಟಣ ದಕ್ಷಿಣ ರಾಜಾಸ್ಥಾನ ಮತ್ತು ರಾಜ್ಯದ ಇತರ ಪ್ರದೇಶಗಳೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ.
ಇಲ್ಲಿ ಆಗಾಗ ಲಘುಭೂಕಂಪಗಳಾಗುತ್ತವೆ. 1916ರಲ್ಲಾದ ಭೂಕಂಪದಿಂದ ಅಪಾರ ನಷ್ಟವಾಯಿತು. ಭಾರತದ ಭೂಕಂಪ ನಕಾಶೆಯ ಬಿ-ವಲಯದಲ್ಲಿ ಈ ಪಟ್ಟಣವಿದೆ.							
(ಪಿ.ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ